ಗೃಹಿಣಿಯಿಂದ ಸರ್ಕಾರಿ ಅಧಿಕಾರಿ ತನಕ – ನನ್ನ KAS/PDO ತಯಾರಿ ಪ್ರಯಾಣ (From Homemaker to Government Officer – My KAS/PDO Preparation Journey)


ಈ ಸರಳ ಅಧ್ಯಯನದೊಂದಿಗೆ ಸಂಘಟಿತರಾಗಿರಿ ಮತ್ತು ನಿಮ್ಮ ಗುರಿಗಳನ್ನು ಸಾಧಿಸಿ.

ರಚನಾತ್ಮಕ ವಸ್ತುಗಳೊಂದಿಗೆ ನಿಮ್ಮ ದಿನವನ್ನು ಯೋಜಿಸಿ, ಒತ್ತಡವನ್ನು ಕಡಿಮೆ ಮಾಡಿ ಮತ್ತು ಗಮನವನ್ನು ಸುಧಾರಿಸಿ.

ನಿಮ್ಮ ಉಚಿತ ಮುದ್ರಣವನ್ನು ಡೌನ್‌ಲೋಡ್ ಮಾಡಿ ಮತ್ತು ಇಂದೇ ಪ್ರಾರಂಭಿಸಿ!

 ಗೃಹಿಣಿಯರಿಗೆ ಕೆಓದು

/ PDO ತಯಾರಿ ಟೈಮ್‌ ಟೇಬಲ್...

ನಾನು 32 ವರ್ಷದ ಗೃಹಿಣಿ. ನನ್ನ ಮಗನ ಶಾಲಾ ಸಮಯ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ. ಮನೆ ಕೆಲಸ, ಮಗುವಿನ ಜವಾಬ್ದಾರಿ ಎಲ್ಲದರ ಮಧ್ಯೆ ಓದೋದು ಸುಲಭವಲ್ಲ. ಆದರೆ ಸರಿಯಾದ ಯೋಜನೆ ಇದ್ದರೆ ದಿನಕ್ಕೆ 4–5 ಗಂಟೆ ಓದುವುದು ಸಾಧ್ಯ.

ನಾನು ಅನುಸರಿಸುತ್ತಿರುವ ಟೈಮ್‌ಟೇಬಲ್ 👇

✅ 1) ವಾರದ ದಿನಗಳ ಟೈಮ್‌ಟೇಬಲ್

(ನನ್ನ ಮಗನ ಶಾಲಾ ಸಮಯ: 8am - 4pm)

ಗುರಿ: ದಿನಕ್ಕೆ 4–5 ಗಂಟೆಗಳ ಕೇಂದ್ರೀಕೃತ ಅಧ್ಯಯನ + ಪುನರಾವರ್ತನೆ

⏰ ಬೆಳಿಗ್ಗೆ ಬೇಗ

(ಬೆಳಿಗ್ಗೆ ಮನಸ್ಸು ಶಾಂತವಾಗಿದೆ. ಓದಿದದ್ದು ಚೆನ್ನಾಗಿ ನೆನಪಿದೆ.)

5:30 – 6:15 am – ಎದ್ದುಕೊಳ್ಳುವುದು, ತಯಾರಿ, ಸ್ವಲ್ಪ ನಡೆದಾಡುವುದು / ವ್ಯಾಯಾಮ

6:15 - 7:00 am - ಪ್ರಸ್ತುತ ಘಟನೆಗಳು + ಪತ್ರಿಕೆ ಓದು

(ನಾನು ಈಗ ಪ್ರಜಾವಾಣಿ ಮತ್ತು ವಿಜಯವಾಣಿ ಓದುತ್ತಿದ್ದೇನೆ)

⏰ ಬೆಳಿಗೆ

7:00 – 8:00 am – ಉಪಹಾರ + ಶಾಲೆಗೆ ಸಿದ್ಧಪಡಿಸುವುದು

8:00 - 9:00 am - ಮನೆ ಕೆಲಸಗಳು

⏰ ಮುಖ್ಯ ಅಧ್ಯಯನ ಸಮಯ

(ಹೆಚ್ಚು ಗಮನ ಬೇಕಾದ ವಿಷಯಗಳು ಈ ಸಮಯದಲ್ಲಿ ಓದುವುದು ಉತ್ತಮ)

9:00 – 11:00 am (2 ಗಂಟೆ) – ಮುಖ್ಯ ವಿಷಯ 1

(ಇತಿಹಾಸ / ರಾಜ್ಯಶಾಸ್ತ್ರ / ಭೂಗೋಳಶಾಸ್ತ್ರ / ಅರ್ಥಶಾಸ್ತ್ರ)

11:00 - 11:15 am - ವಿರಾಮ

11:15 – 12:15 pm (1 ಗಂಟೆ) – ಮುಖ್ಯ ವಿಷಯ 2

(KAS ಗೆ ವಿಜ್ಞಾನ/ಪರಿಸರ

ಅಥವಾ PDO ಗೆ ಕಂಪ್ಯೂಟರ್ / ಭಾಷೆ)

⏰ ಮಧ್ಯಾಹ್ನ

12:15 - 1:00 pm - ಊಟ + ವಿಶ್ರಾಂತಿ

1:00 – 2:00 pm (1 ಗಂಟೆ) – ಪುನರಾವರ್ತನೆ / ಟಿಪ್ಪಣಿಗಳ ತಯಾರಿ

⏰ ಸಂಜೆ

3:00 – 4:00 pm – ಮಗು ಮನೆಗೆ ಬರುತ್ತದೆ + ತಿಂಡಿ + ಹೋಂವರ್ಕ್

5:00 – 6:00 pm (1 ಗಂಟೆ) – MCQ ಗಳು / ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಅಭ್ಯಾಸ

(ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದುವುದರಿಂದ ಪರೀಕ್ಷೆಯ ಮಾದರಿ ಮತ್ತು ಪ್ರಶ್ನೆಗಳ ರೀತಿ ಅರ್ಥವಾಗುತ್ತದೆ.)

6:30 – 7:15 pm – ಲಘು ಪುನರಾವರ್ತನೆ / ಓದು

⏰ ರಾತ್ರಿ

8:00 – 8:30 pm – ಕರ್ನಾಟಕ ಸಂಬಂಧಿತ ಸುದ್ದಿ / ಸಾಮಾನ್ಯ ಜ್ಞಾನ

8:30 - 9:00 pm - ಮುಂದಿನ ದಿನದ ಯೋಜನೆ

ರಾತ್ರಿ 9:30 – ನಿದ್ರೆ

➡️ ಒಟ್ಟು ಅಧ್ಯಯನ: ಸುಮಾರು 4.5 – 5 ಗಂಟೆ

ನಿರಂತರತೆ ಇದ್ದರೆ ಇದು ಸಾಕಷ್ಟು!

✅ 2) ವಾರಾಂತ್ಯ / ರಜೆ ದಿನಗಳ ಟೈಮ್‌ಟೇಬಲ್

ಗುರಿ: 3.5 – 4 ಗಂಟೆಗಳ ಅಧ್ಯಯನ

⏰ ಬೆಳಿಗ್ಗೆ (ಮಗು ಎದ್ದುಕೊಳ್ಳುವ)

6:00 - 7:00 am - ಪ್ರಸ್ತುತ ಘಟನೆಗಳು + ಪತ್ರಿಕೆ

⏰ ಬೆಳಗಿನ ಅಧ್ಯಯನ

8:30 – 10:00 am (1.5 ಗಂಟೆ) – ಮುಖ್ಯ ವಿಷಯ ಅಧ್ಯಯನ

⏰ ಕುಟುಂಬ ಸಮಯ

10:00 – 12:00 pm – ಮನೆ ಕೆಲಸ + ಮಗುವಿನ ಜೊತೆ ಸಮಯ

(ನಾವು ಎಷ್ಟು ಬ್ಯುಸಿಯಾಗಿದ್ದರೂ ಮಗುವಿಗೆ ಸಮಯ ಕೊಡುವುದು ತುಂಬಾ ಮುಖ್ಯ.)

⏰ ಮಧ್ಯಾಹ್ನ

1:30 - 2:30 pm - ಪುನರಾವರ್ತನೆ

⏰ ಸಂಜೆ

4:00 - 5:00 pm - ಮ್ಯಾಕ್ ಟೆಸ್ಟ್ / MCQ ಗಳು

➡️ ವಾರಾಂತ್ಯದಲ್ಲಿ ಮಾಕ್ ಟೆಸ್ಟ್ ಮಾಡುವುದು ಬಹಳ ಮುಖ್ಯ.

🔁 ವಾರದ ವಿಷಯ ಹಂಚಿಕೆ ಯೋಜನೆ

ಸೋಮವಾರ – ಇತಿಹಾಸ + ರಾಜ್ಯಶಾಸ್ತ್ರ

ಮಂಗಳವಾರ – ಭೂಗೋಳಶಾಸ್ತ್ರ + ಕರ್ನಾಟಕ ಇತಿಹಾಸ

ಬುಧವಾರ – ಅರ್ಥಶಾಸ್ತ್ರ + ಅಭಿವೃದ್ಧಿ ವಿಷಯಗಳು

ಗುರುವಾರ – ವಿಜ್ಞಾನ/ಪರಿಸರ ಅಥವಾ PDO ಗೆ ಕಂಪ್ಯೂಟರ್

ಶುಕ್ರವಾರ – MCQs + ಹಿಂದಿನ ಪ್ರಶ್ನೆಗಳು

ಶನಿವಾರ – ಸಂಪೂರ್ಣ ಪುನರಾವರ್ತನೆ

ಭಾನುವಾರ – ಮಾಕ್ ಟೆಸ್ಟ್ + ಲಘು ಓದು


🌸 ಕೊನೆಯ ಮಾತು

ಹೆಣ್ಮಕ್ಕಳು ಮನೆಯಲ್ಲಿಯೇ ಇರುತ್ತಾರೆ ಅಂದ್ರೆ ಅವರು ಏನೂ ಮಾಡೋದಿಲ್ಲ ಅನ್ನೋ ಮಾತು ಇರುತ್ತದೆ. ಆದರೆ ಮನೆ ಕೆಲಸ ಎಷ್ಟು ಜವಾಬ್ದಾರಿಯ ವಿಷಯ ಅನ್ನೋದು ಹೆಣ್ಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ.

ಎಲ್ಲರ ನಡುವೆ ನಾನೂ ಗುರುತಿಸಿಕೊಳ್ಳುವ ವ್ಯಕ್ತಿಯಾಗಬೇಕು ಅನ್ನೋದು ನನ್ನ ಕನಸು.

ನಿಮ್ಮ ಕನಸೂ ಅದೇ ಆಗಿದ್ರೆ, ನನ್ನ ಪ್ರಯಾಣವನ್ನು ಫಾಲೋ ಮಾಡಿ.

ಧನ್ಯವಾದಗಳು ❤️

Comments

Popular posts from this blog

PDO exam preparation guide 2026 in kannada